‘ಕೋಟಿಗೊಬ್ಬ-೨’ ನಾಳೆಯಿಂದ ತೆರೆಗೆ
Posted date: 11 Thu, Aug 2016 – 11:07:04 AM

ರಾಕ್‌ಲೈನ್ ವೆಂಕಟೇಶ್ ಅರ್ಪಿಸಿ, ರಾಂಬಾಬು ಪ್ರೊಡಕ್ಷನ್ ಅಡಿಯಲ್ಲಿ ಎಂ.ಬಿ. ಬಾಬು ನಿರ್ಮಿಸಿರುವ ಚಿತ್ರ ‘ಕೋಟಿಗೊಬ್ಬ-೨’.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ‘ಕೋಟಿಗೊಬ್ಬ-೨’ ಚಿತ್ರವನ್ನು ತಮಿಳಿನ ಹೆಸರಾಂತ ನಿರ್ದೇಶಕರಾದ ಕೆ.ಎಸ್. ರವಿಕುಮಾರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರೊಟ್ಟಿಗೆ ನಾಯಕಿಯಾಗಿ ನಿತ್ಯಾ ಮೆನನ್ ನಟಿಸಿದ್ದಾರೆ.
ಚಿತ್ರಕ್ಕೆ ಡಿ. ಇಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹರ್ಷ ಎ., ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ, ರಾಜಾ ರತ್ನಂ ಅವರ ಛಾಯಾಗ್ರಹಣವಿದೆ.
ಸುದೀಪ್, ನಿತ್ಯಾ ಮೆನನ್, ರವಿಶಂಕರ್, ಸಾಧು ಕೋಕಿಲ, ದೇವರಾಜ್, ಚಿಕ್ಕಣ್ಣ, ಮುಕೇಶ್ ತಿವಾರಿ ಸೇರಿದಂತೆ ಇನ್ನೂ ಅನೇಕರ ತಾರಾಗಣ ‘ಕೋಟಿಗೊಬ್ಬ-೨’ ಚಿತ್ರಕ್ಕಿದೆ.
ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಿಸಲಾಗಿರುವ ಈ ಚಿತ್ರ ನಾಳೆಯಿಂದ ಇದೇ ಆಗಸ್ಟ್ ೧೨ರಂದು ತೆರೆಗೆ ಬರುತ್ತಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed